ಮಂಗಳವಾರ, ಸೆಪ್ಟೆಂಬರ್ 27, 2011

ದೇವರ ಮಗುವಾಗುವುದರಿಂದ ನೀನು ಏನನ್ನು ತಪ್ಪಿಸಿಕೊಳ್ಳುತ್ತೀ?

ನರಕ ಮತ್ತು ಬೆಂಕಿಯ ಕೆರೆ


• ಒಂದು ಬೆಂಕಿಯ ಕೆರೆ (ಪ್ರಕಟಣೆ ೨೦:೧೫)
• ಒಂದು ತಳವಿಲ್ಲದ ಗುಂಡಿ (ಪ್ರಕಟಣೆ ೨೦:೧)
• ನಿತ್ಯವಾಗಿ ಉರಿಯುತ್ತಿರುವ ಸ್ಥಳ (ಯೆಶಾಯ ೩೩:೧೪)
• ನಾಶಮಾಡುವ ಬೆಂಕಿ (ಯೆಶಾಯ ೩೩:೧೪)
• ಬೆಂಕಿಯ ಕುಲುಮೆ (ಮತ್ತಾಯ ೧೩:೪೧-೪೨)
• ಯಾತನೆಗಳ ಸ್ಥಳ (ಲೂಕ ೧೬:೨೩)
• ನಿತ್ಯವಾಗಿ ಶಿಕ್ಷಿಸಲ್ಪಡುವ ಸ್ಥಳ (ಮತ್ತಾಯ ೨೫:೪೬)
• ಜನರು ಪ್ರಾರ್ಥಿಸುವ ಒಂದು ಸ್ಥಳ (ಲೂಕ ೧೬:೨೭)
• ಜನರು ಕರುಣೆಗಾಗಿ ಮೊರೆಯಿಡುವ ಒಂದು ಸ್ಥಳ (ಲೂಕ ೧೬:೨೪)
• ಜನರು ಗೋಳಾಡುವ ಸ್ಥಳ (ಮತ್ತಾಯ ೧೩:೪೨)
• ಪಾಪಿಗಳು ದೇವರನ್ನು ಶಪಿಸುವ ಒಂದು ಸ್ಥಳ (ಪ್ರಕಟಣೆ ೧೬:೧೧)
• ಪಾಪಿಗಳು ಎಂದೆಂದಿಗೂ ಪಶ್ಛಾತ್ತಾಪ ಪಡದ ಒಂದು ಸ್ಥಳ (ಮತ್ತಾಯ ೧೨:೩೨)
• ಅಶುದ್ಧತೆಯ ಒಂದು ಸ್ಥಳ (ಪ್ರಕಟಣೆ ೨೨:೧೦-೧೧)
• ಕಣ್ಣೀರಿಡುವ ಒಂದು ಸ್ಥಳ (ಮತ್ತಾಯ ೮:೧೨)
• ದುಃಖಗಳಿರುವ ಒಂದು ಸ್ಥಳ (ಕೀರ್ತನೆ ೧೮:೫)
• ಕತ್ತಲೆಯ ಒಂದು ಸ್ಥಳ (ಮತ್ತಾಯ ೮:೧೨)
• ಪಾಪಿಗಳಿಗೆ ವಿಶ್ರಾಂತಿ ಇಲ್ಲದ ಒಂದು ಸ್ಥಳ (ಪ್ರಕಟಣೆ ೧೪:೧೧)
• ಪಾಪಿಗಳು ಕಟಕಟನೆ ಹಲ್ಲು ದಡಿಯುವ ಒಂದು ಸ್ಥಳ (ಪ್ರಕಟಣೆ ೧೬:೧೦)
• ಎಂದೆಂದಿಗೂ ಅಂಧಕಾರವಿರುವ ಒಂದು ಸ್ಥಳ (ಯೂದ ೧೩)
• ಪಾಪಿಗಳನ್ನು ಹಿಂಸಿಸುವ ಹುಳವು ಸಾಯದಿರುವ ಮತ್ತು ಬೆಂಕಿಯು ಆರದಿರುವ ಒಂದು ಸ್ಥಳ (ಮಾರ್ಕ ೯:೪೮)
• ಪಾಪಿಗಳು ಬೆಂಕಿ ಗಂಧಕಗಳಿಂದ ಹಿಂಸಿಸಲ್ಪಡುವ ಒಂದು ಸ್ಥಳ (ಪ್ರಕಟಣೆ ೧೪:೧೦)
• ಪಾಪಿಗಳ ಯಾತನೆಯ ಹೊಗೆಯು ಎಂದೆಂದಿಗೂ ಏರುತ್ತಿರುವ ಒಂದು ಸ್ಥಳ (ಪ್ರಕಟಣೆ ೧೪:೧೧)
• ಪಾಪಿಗಳು, ತಮ್ಮ ಪ್ರೀತಿಪಾತ್ರರು ಬರಬಾರದೆಂದು ಬಯಸುವ ಒಂದು ಸ್ಥಳ (ಲೂಕ ೧೬:೨೮)
• ಹೇಡಿಗಳು, ನಂಬದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು ಮತ್ತು ಎಲ್ಲಾ ಸುಳ್ಳುಗಾರರು ಬೆಂಕಿ ಗಂಧಕಗಳು ಧಹಿಸುವ ಒಂದು ಸ್ಥಳದಲ್ಲಿ ಇರುವರು (ಪ್ರಕಟಣೆ ೨೧:೮)
• ಪಾಪಿಗಳು ತಮ್ಮ ಪಾಪ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ಅನುಭವಿಸುವ ಒಂದು ಸ್ಥಳ (ಮತ್ತಾಯ ೨೩:೧೪)
• ಸುವಾರ್ತೆಯನ್ನು ತಿರಸ್ಕರಿಸುವವರು ವಾಸಿಸುವ ಒಂದು ಸ್ಥಳ (ಮತ್ತಾಯ ೧೦:೧೫)

" ಇಂಥಾ ಶ್ರೇಷ್ಥ ರಕ್ಷಣೆಯನ್ನು ಅಲಕ್ಷ ಮಾಡಿದರೆ ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?" (ಇಬ್ರಿಯರಿಗೆ ೨:೩)

ಕಾಮೆಂಟ್‌ಗಳಿಲ್ಲ: