ಶನಿವಾರ, ಡಿಸೆಂಬರ್ 15, 2012

ಪಾದ್ರಿಗಳ ಕೊರತೆ: ಮನೆಗೊಂದು ಮಗುವ ಪಾದ್ರಿ ಮಾಡಿಸಿ.


ಕೇರಳ ರಾಜ್ಯದಲ್ಲಿರುವ ಅನೇಕಾನೇಕ ಚರ್ಚುಗಳಲ್ಲಿ ಇತ್ತೀಚೆಗೆ ಪಾದ್ರಿಗಳ ಕೊರತೆ ಎದುರಾಗಿದೆ ಎಂದು ಮಲಬಾರ್ ಕ್ಯಾಥೊಲಿಕ್ ಚರ್ಚ್ ಆತಂಕ ವ್ಯಕ್ತಪಡಿಸಿದೆ. ಹಾಗಾಗಿ ಇದನ್ನು ಮೆಟ್ಟಿನಿಲ್ಲಲು ಪ್ರತಿ ಮನೆಯಿಂದಲೂ ಒಂದೊಂದು ಮಗುವನ್ನು ಪಾದ್ರಿಯನ್ನಾಗಿ ಮಾಡಿಸಬೇಕು ಎಂದು ಸಲಹೆ MCC ಒತ್ತಾಯಿಸಿದೆ. ದೇವರ ಕರೆಗೆ ಎಲ್ಲರೂ ಓಗೊಡಬೇಕು: ಮುಖ್ಯವಾಗಿ ನವದಂಪತಿಗಳನ್ನು ಗುರಿಯಾಗಿಸಿಕೊಂಡು ಈ ಸಲಹೆ ನೀಡಿರುವ MCC, ಒಂದು ಮಗುವನ್ನಾದರೂ ಕ್ರೈಸ್ತ ಸನ್ಯಾಸಿಯನ್ನಾಗಿಸಲು ಮುಂದೆ ಬರಬೇಕು ಎಂದು ಕೋರಿದೆ. ಈ ಬಗ್ಗೆ ಈಗಾಗಲೇ ಹಲವು ವೇದಿಕೆಗಳಲ್ಲಿ ಧ್ವನಿಯೆತ್ತಲಾಗಿದೆ. ಅದರಲ್ಲೂ ಮದುವೆ ಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು MCC ಪರವಾಗಿ ಫಾದರ್ ಸಿತಿಯಾಕ್ ಕೊಟ್ಟಾಯಿಲ್ ಹೇಳಿದ್ದಾರೆ. ಗರ್ಭನಿರೋಧಕ ಸಂಸ್ಕತಿಗೆ ತಿಲಾಂಜಲಿಯಿಡಿ: ಗರ್ಭನಿರೋಧಕ ಸಂಸ್ಕೃತಿ ಆತ್ಮಾಹುತಕಾರಿ ಮತ್ತು ಆತಂಕಕಾರಿ. ಈ ಸ್ವಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಜನ ಜಾಗೃತರಾಗಿ ಒಂದು ಮಗುವನ್ನಾದರೂ ಪಾದ್ರಿ ಸೇವೆಗೆ ಕಾಣಿಕೆಯಾಗಿ ನೀಡಬೇಕು. ದೇವರ ಈ ಕರೆಗೆ ಎಲ್ಲರೂ ಓಗೊಡಬೇಕು ಎಂದು ಅವರು ಕರೆ ನೀಡಿದ್ದಾರೆ. ಕೇರಳದಲ್ಲಿ ಚರ್ಚ್ ಗಳು ಹೆಚ್ಚಾಗಿಯೇ ಇವೆ. ಗಲ್ಫ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ದಂಪತಿಗಳು ತಮ್ಮ ಮಕ್ಕಳನ್ನು ಚರ್ಚ್ ಸೇವೆಗೆ ಕಳುಹಿಸಿಕೊಡುವ ಮಾದರಿಯಲ್ಲಿ ನಮ್ಮಲ್ಲಿಯೂ ಒಂದು ಮಗುವನ್ನಾದರೂ ಸಮುದಾಯದಲ್ಲಿ ಪೌರೋಹಿತ್ಯ ಸೇವೆಗೆ ಅರ್ಪಿಸಬೇಕು ಎಂದು ಚರ್ಚ್ ಮನವಿ ಮಾಡಿದೆ.

 

 

 

 

 

ಶುಕ್ರವಾರ, ಜೂನ್ 8, 2012

ಮೈಸೂರಿನ ಚರ್ಚಲ್ಲಿ ವಿದೇಶಿಯರಿಗೆ ಡ್ರೆಸ್ ಕೋಡ್

ಮೈಸೂರಿನಲ್ಲಿರುವ ಐತಿಹಾಸಿಕ ಸೇಂಟ್ ಫಿಲೋಮಿನಾ ಚರ್ಚಿಗೆ ವಿದೇಶಿಯರು ಸೇರಿದಂತೆ ಸಹಸ್ರಾರು ಪ್ರವಾಸಿಗರು ಪ್ರತಿದಿನ ಬರುತ್ತಾರೆ. ಆದರೆ, ವಿದೇಶಿಯರು ಅಸಭ್ಯವಾಗಿ ಉಡುಪು ಧರಿಸಿ ಬರುವುದರ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲು ಚರ್ಚ್‌ನ ಆಡಳಿತ ವರ್ಗ ಮುಂದಾಗಿದೆ. "ಇದು ಪ್ರಾರ್ಥನಾ ಸ್ಥಳ, ಹೇಗೆಂದ ಹಾಗೆ ಉಡುಪು ಧರಿಸಿ ಬರಲು ಇದೇನು ಮಾರುಕಟ್ಟೆಯಲ್ಲ" ಎಂದು ಡ್ರೆಸ್ ಕೋಡ್‌ಗೆ ಅನುಮತಿ ನೀಡಿರುವ ಮೈಸೂರಿನ ಬಿಷಪ್ ಅವರು ಅಸಹ್ಯವಾಗಿ ಉಡುಪಿ ಧರಿಸಿ ಬರುತ್ತಿರುವ ವಿದೇಶಿಯರ ಬಗ್ಗೆ ಖಾರವಾಗಿ ನುಡಿದಿದ್ದಾರೆ. ಚರ್ಚ್‌ಗಳಲ್ಲಿ ಡ್ರೆಸ್ ಕೋಡ್ ರೂಪಿಸುತ್ತಿರುವುದು ಇದೇ ಮೊದಲು.

ಶುಕ್ರವಾರ, ಮೇ 11, 2012

ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರಿಗೆ ಗೃಹ ಸಾಲದ ಮೇಲಿನ ಬಡ್ಡಿ ಮನ್ನಾ.

ಮಂಗಳೂರು, ಮೇ 11: ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದವರು ಸರಕಾರಿ ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರದ ಕ್ರೈಸ್ತ ಸಮುದಾಯದವರ ಅಭಿವೃದ್ಧಿ ಯೋಜನೆಯಡಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ಈ ಸವಲತ್ತು ಕಲ್ಪಿಸಲಾಗಿದೆ. ಈ ಯೋಜನೆಯಡಿ 2007ರ ನಂತರದ ಬಡ್ಡಿಯನ್ನು ನೇರವಾಗಿ ಆಯಾ ಬ್ಯಾಂಕುಗಳಿಗೆ Karnataka Minorities Development Corporation (KMDC) ಸಂಸ್ಥೆ ನೇರವಾಗಿ ಪಾವತಿಸಲಿದೆ. ಫಲಾನುಭವಿಗಳು ಇದನ್ನು ಮರುಪಾವತಿಸುವ ಅಗತ್ಯವಿರುವುದಿಲ್ಲ ಎಂದು KMDC ಅಧ್ಯಕ್ಷ ಎನ್ ಬಿ ಅಬೂಬಕ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಾರ್ಷಿಕ 1.5 ಲಕ್ಷ ರುಪಾಯಿಗಿಂತ ಕಡಿಮೆ ಆದಾಯವಿರುವ ಕ್ರೈಸ್ತ ಕುಟುಂಬಗಳು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 164 ಫಲಾನುಭವಿಗಳನ್ನು ಗುರುತಿಸಲಾಗಿತ್ತು, 1.23 ಕೋಟಿ ರುಪಾಯಿ ಬಡ್ಡಿ ಮನ್ನಾ ಆಗಲಿದೆ. ಕನಿಷ್ಠ 1 ಲಕ್ಷ ಮತ್ತು ಗರಿಷ್ಠ 5 ಲಕ್ಷ ರುಪಾಯಿ ಗೃಹ ಸಾಲ ಪಡೆದವರಿಗೆ ಇದು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,771 ಮಂದಿ ಕ್ರೈಸ್ತರಿಗೆ ಆರ್ಥಿಕವಾಗಿ ನೆರವಾಗಲು ನಾನಾ ಯೋಜನೆಗಳಡಿ 10.71 ಕೋಟಿ ರು. ನಿಧಿಯಿದೆ.



ಮಂಗಳವಾರ, ಮಾರ್ಚ್ 27, 2012

ಗಲ್ಫ್ನಲ್ಲಿನ ಚರ್ಚ್ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ! ( ಪ್ರಾರ್ಥನೆ ಮಾಡಿ ಅದೇ ಪರಿಹಾರ )

'ಅರಬ್ ರಾಷ್ಟ್ರಗಳಲ್ಲಿರುವ ಚರ್ಚ್‌ಗಳನ್ನು ಧ್ವಂಸಗೊಳಿಸಿ'...ಇದು ಸೌದಿ ಅರೇಬಿಯಾದ ಮುಸ್ಲಿಮ್ ಧಾರ್ಮಿಕ ಮುಖಂಡ ಹೊರಡಿಸಿರುವ ಫತ್ವಾ!...ಇದೀಗ ಧಾರ್ಮಿಕ ಮುಖಂಡ ಮಫ್ತಿ ಫತ್ವಾ ವಿರುದ್ಧ ಜರ್ಮನಿ, ಆಸ್ಟ್ರಿಯಾ ಹಾಗೂ ರಷ್ಯಾದ ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲ್ಫ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವಿದೇಶಿಗರ ಮಾನವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಗ್ರಾಂಡ್ ಮುಫ್ತಿ ಶೇಕ್ ಅಬ್ದುಲ್ಲಾಜೀಜ್ ಅಲ್ ಶೇಕ್ ಅವರ ಫತ್ವಾವನ್ನು ಯಾವುದೇ ಕಾರಣಕ್ಕೂ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಜರ್ಮನ್ ಮತ್ತು ಆಸ್ಟ್ರಿಯಾದ ರೋಮನ್ ಕ್ಯಾಥೋಲಿಕ್ ಬಿಷಪ್ಸ್ ತಮ್ಮ ಪ್ರತ್ಯೇಕ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಲ್ಫ್ ಅರಬ್ ದೇಶದಲ್ಲಿ ಸುಮಾರು 35ಲಕ್ಷ ಕ್ರಿಶ್ಚಿಯನ್‌ರು ವಾಸಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಭಾರತ ಮತ್ತು ಫಿಲಿಫೈನ್ಸ್‌ ದೇಶವರಾಗಿದ್ದಾರೆ. ಆದರೆ ಮುಸ್ಲಿಮೇತರರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ. ಒಂದು ಮನೆಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದು ಕಂಡು ಬಂದಲ್ಲಿ ಅಂತಹವರನ್ನು ಬಂಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈಟ್, ಬಹರೈನ್, ಒಮಾನ್ ಮತ್ತು ಯೆಮೆನ್‌ಗಳಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳಿವೆ. ಆದರೆ ಗ್ರಾಂಡ್ ಮುಫ್ತಿ ಅವರು ಸೌದಿ ರಾಜನ ಕುಮ್ಮಕ್ಕು ಇಲ್ಲದೆಯೇ ಈ ಫತ್ವಾವನ್ನು ಹೊರಡಿಸಲು ಸಾಧ್ಯವೇ ಎಂಬುದಾಗಿ ಕ್ರಿಶ್ಚಿಯನ್ ಬಿಷಪ್ಸ್ ಪ್ರಶ್ನಿಸಿದ್ದಾರೆ.



ಭಾನುವಾರ, ಮಾರ್ಚ್ 4, 2012

ಬ್ರಿಟನ್ನಿನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕ್ಷೀಣಿಸಲಿದೆ.ಬ್ರಿಟನ್ನಿನಲ್ಲಿ ಹಿಂದೂ, ಮುಸ್ಲಿಮರದ್ದೇ ಕಾರುಬಾರು!

ಲಂಡನ್, 2030 ಇಸ್ವಿ ವೇಳೆಗೆ ಬ್ರಿಟನ್ನಿನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕ್ಷೀಣಿಸಲಿದೆ. ಬದಲಿಗೆ ಹಿಂದೂ, ಮುಸ್ಲಿಮರದ್ದೇ ಅಲ್ಲಿ ಕಾರುಬಾರು! ವರ್ಷ ವರ್ಷವೂ ಕ್ರಿಶ್ಚಿಯನ್ನರ ಸಂಖ್ಯೆ ಅಲ್ಲಿ ಕಡಿಮೆಯಾಗುತ್ತಿದೆ. ಗಮನಾರ್ಹವೆಂದರೆ ಬ್ರಿಟನ್ನಿನಲ್ಲಿ ಒಂದೆಡೆ ಕ್ರಿಶ್ಚಿಯನ್ನರ ಸಂಖ್ಯೆ ಕ್ಷೀಣಿಸುತ್ತಿದ್ದರೆ ಮತ್ತೊಂದೆಡೆ ಇತರೆ ಸಮುದಾಯದವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ವೃದ್ಧಿಸುತ್ತಿದೆ. ಕಳೆದಾರು ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯೆ ಶೇ.43ರಷ್ಟು ಏರಿದ್ದರೆ ಬೌದ್ಧರ ಸಂಖ್ಯೆ ಶೇ. 74ರಷ್ಟು ಹೆಚ್ಚಾಗಿದೆ. ಇನ್ನು, ಮುಸ್ಲಿಮರ ಜನಸಂಖ್ಯೆ ಶೇ. 37ರಷ್ಟು ಏರಿದ್ದು, 26 ಲಕ್ಷಕ್ಕೆ ತಲುಪಿದೆ. ಆದರೆ ಸಿಖ್ಖರು ಮತ್ತು ಯಹೂದಿಗಳ ಸಂಖ್ಯೆ ಇಳಿಮುಖವಾಗಿದೆ. ಆರು ವರ್ಷಗಳಲ್ಲಿ ಶೇ. 7.6ರಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು 2010ನೇ ಇಸ್ವಿಯಲ್ಲಿ ಬ್ರಿಟನ್ನಿನಲ್ಲಿ 41.1 ದಶಲಕ್ಷ ಮಂದಿಯಿದ್ದರು.