ಶನಿವಾರ, ಡಿಸೆಂಬರ್ 15, 2012

ಪಾದ್ರಿಗಳ ಕೊರತೆ: ಮನೆಗೊಂದು ಮಗುವ ಪಾದ್ರಿ ಮಾಡಿಸಿ.


ಕೇರಳ ರಾಜ್ಯದಲ್ಲಿರುವ ಅನೇಕಾನೇಕ ಚರ್ಚುಗಳಲ್ಲಿ ಇತ್ತೀಚೆಗೆ ಪಾದ್ರಿಗಳ ಕೊರತೆ ಎದುರಾಗಿದೆ ಎಂದು ಮಲಬಾರ್ ಕ್ಯಾಥೊಲಿಕ್ ಚರ್ಚ್ ಆತಂಕ ವ್ಯಕ್ತಪಡಿಸಿದೆ. ಹಾಗಾಗಿ ಇದನ್ನು ಮೆಟ್ಟಿನಿಲ್ಲಲು ಪ್ರತಿ ಮನೆಯಿಂದಲೂ ಒಂದೊಂದು ಮಗುವನ್ನು ಪಾದ್ರಿಯನ್ನಾಗಿ ಮಾಡಿಸಬೇಕು ಎಂದು ಸಲಹೆ MCC ಒತ್ತಾಯಿಸಿದೆ. ದೇವರ ಕರೆಗೆ ಎಲ್ಲರೂ ಓಗೊಡಬೇಕು: ಮುಖ್ಯವಾಗಿ ನವದಂಪತಿಗಳನ್ನು ಗುರಿಯಾಗಿಸಿಕೊಂಡು ಈ ಸಲಹೆ ನೀಡಿರುವ MCC, ಒಂದು ಮಗುವನ್ನಾದರೂ ಕ್ರೈಸ್ತ ಸನ್ಯಾಸಿಯನ್ನಾಗಿಸಲು ಮುಂದೆ ಬರಬೇಕು ಎಂದು ಕೋರಿದೆ. ಈ ಬಗ್ಗೆ ಈಗಾಗಲೇ ಹಲವು ವೇದಿಕೆಗಳಲ್ಲಿ ಧ್ವನಿಯೆತ್ತಲಾಗಿದೆ. ಅದರಲ್ಲೂ ಮದುವೆ ಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು MCC ಪರವಾಗಿ ಫಾದರ್ ಸಿತಿಯಾಕ್ ಕೊಟ್ಟಾಯಿಲ್ ಹೇಳಿದ್ದಾರೆ. ಗರ್ಭನಿರೋಧಕ ಸಂಸ್ಕತಿಗೆ ತಿಲಾಂಜಲಿಯಿಡಿ: ಗರ್ಭನಿರೋಧಕ ಸಂಸ್ಕೃತಿ ಆತ್ಮಾಹುತಕಾರಿ ಮತ್ತು ಆತಂಕಕಾರಿ. ಈ ಸ್ವಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಜನ ಜಾಗೃತರಾಗಿ ಒಂದು ಮಗುವನ್ನಾದರೂ ಪಾದ್ರಿ ಸೇವೆಗೆ ಕಾಣಿಕೆಯಾಗಿ ನೀಡಬೇಕು. ದೇವರ ಈ ಕರೆಗೆ ಎಲ್ಲರೂ ಓಗೊಡಬೇಕು ಎಂದು ಅವರು ಕರೆ ನೀಡಿದ್ದಾರೆ. ಕೇರಳದಲ್ಲಿ ಚರ್ಚ್ ಗಳು ಹೆಚ್ಚಾಗಿಯೇ ಇವೆ. ಗಲ್ಫ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ದಂಪತಿಗಳು ತಮ್ಮ ಮಕ್ಕಳನ್ನು ಚರ್ಚ್ ಸೇವೆಗೆ ಕಳುಹಿಸಿಕೊಡುವ ಮಾದರಿಯಲ್ಲಿ ನಮ್ಮಲ್ಲಿಯೂ ಒಂದು ಮಗುವನ್ನಾದರೂ ಸಮುದಾಯದಲ್ಲಿ ಪೌರೋಹಿತ್ಯ ಸೇವೆಗೆ ಅರ್ಪಿಸಬೇಕು ಎಂದು ಚರ್ಚ್ ಮನವಿ ಮಾಡಿದೆ.

 

 

 

 

 

ಕಾಮೆಂಟ್‌ಗಳಿಲ್ಲ: