ಯೇಸು ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) ಕ್ರೈಸ್ತ ಧರ್ಮದಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ. 'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ I-e-sousವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ ಯೇಸು ಕ್ರಿಸ್ತ(ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ ನಜರೆತ್ ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಯೇಸುವಿನ ತಂದೆ ಜೋಸೆಫ್ ಒಬ್ಬ ಬಡಗಿ. ತಾಯಿ ಮೇರಿ. ಇವರಿಬ್ಬರ ಪುತ್ರನೇ ಯೇಸು. ಮೇರಿಯು ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ. ಅಲ್ಲೇ ಯೇಸುವಿನ ಜನನವಾಗುತ್ತದೆ.
ಯೇಸುವಿನ ಜೀವನ ವೃತ್ತಾಂತ ಕಂಡುಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದಬೈಬಲ್‌ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿ, ಕೊನೆಗೆ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಶಿಲುಬೆಗೆ ಏರಿಸಲ್ಪಡುತ್ತಾರೆ. ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ (ನ್ಯೂ ಟೆಸ್ಟಮೆಂಟ್) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ