ಬುಧವಾರ, ಡಿಸೆಂಬರ್ 7, 2011
ಝಾಕ್ ಪೂನನ್ರವರ ಸಾಕ್ಷಿಯ ಬದುಕಿನ ಬಗ್ಗೆ ಬರೆಯಲು ಹೆಮ್ಮೆ ಅಲ್ಲವೆ ನನಗೆ.
ನಾನು ಝಾಕ್ ಪೂನನ್ರವರನು ನೋಡಿದ್ದು 25 ವರ್ಷಗಳ ಹಿಂದೆ ಹುಬ್ಬಳ್ಳಿಯ ಸುವಾರ್ತೆಕೂಟದಲ್ಲಿ. ಆಮೇಲೆ ನಾನು ಬೆಂಗಳೂರಿನ ಅವರ church ನಲ್ಲಿ ನೋಡಿದ್ದು. ಬಹಳಷ್ಟು ಸಾರೀ churchಗೆ ಹೋಗಿದ್ದೆನೆ. ಸತ್ಯವೇದದ ಕಠೋರ ಸತ್ಯದ ಬಗೆಗಿನ ಅವರ ಮಾತುಗಳು ಮತ್ತು ಜೀವನ ಶೈಲಿ ಸಾಕ್ಷಿಗೆ ಹಿಡಿದ ಕನ್ನಡಿಯಾಗಿದೆ. ಅವರ ಸಾಕ್ಷಿಯ ಬದುಕಿನ ಬಗ್ಗೆ ಬರೆಯಲು ಹೆಮ್ಮೆ ಅಲ್ಲವೆ ನನಗೆ. ಝಾಕ್ ಪೂನನ್ ರವರು ಈ ಹಿಂದೆ ಒಬ್ಬ ನೌಕಾ ಅಧಿಕಾರಿಯಾಗಿದ್ದು, ಕಳೆದ 40 ವರ್ಷಗಳಲ್ಲಿ ಒಬ್ಬ ಸತ್ಯವೇದದ ಭೋಧಕರಾಗಿಯೂ ಮತ್ತು ಹಲವಾರು ಸಭೆಗಳ ಜವಾಬ್ದಾರಿಯನ್ನು ಹೊತ್ತುಕೊಂಡ ಸಭಾಹಿರಿಯರಾಗಿಯೂ ಕರ್ತನ ಸೇವೆಯನ್ನು ಮಾಡಿದ್ದಾರೆ.ಇವರು ಆಂಗ್ಲ ಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಮತ್ತು ಈ ಪುಸ್ತಕಗಳು ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ. ಭಾರತ ಮತ್ತು ಇತರ ದೇಶಗಳಲ್ಲಿ ಇವರು ಮಾಡಿದ ಪ್ರಸಂಗಗಳು- ಧ್ವನಿ (ಆಡಿಯೋ) ಮತ್ತು ವೀಡಿಯೋ ಸಿ.ಡಿ.ಗಳಲ್ಲಿ ಲಭ್ಯವಿದೆ.. ಕ್ರೈಸ್ತ ಅನ್ಯೋನ್ಯತಾ ಸಭೆಯ ಇತರ ಹಿರಿಯರಂತೆ , ಝಾಕ್ ಪೂನನ್ ರವರೂ ಕೂಡ ತಮ್ಮ ಸೇವೆಗೆ ಯಾವುದೇ ರೀತಿಯ ಸಂಬಳವನ್ನು ಪಡೆಯದೆ, ತಮ್ಮ ಮತ್ತು ತಮ್ಮ ಕುಟುಂಬದ ಅವಶ್ಯಕತೆಗಳನ್ನು ‘ಗುಡಾರ ಕಟ್ಟುವುದರ’ ಮೂಲಕ (ಸ್ವಂತ ದುಡಿಮೆಯಿಂದ) ಪೂರೈಸುತ್ತಾ ಬಂದಿದ್ದಾರೆ. ಅವರ ಸಿ.ಡಿ., ಪುಸ್ತಕ ಹಾಗು ಕ್ಯಾಸೆಟ್ ಗಳು - ಕ್ರೈಸ್ತ ಅನ್ಯೋನ್ಯತಾ ಕೇಂದ್ರದಿಂದ ಪ್ರಕಾಶಿಸಲ್ಪಟ್ಟರೂ ಇದರಿಂದ ಅವರು ಯಾವುದೇ ರೀತಿಯ ಗೌರವ ಧನವನ್ನು ಪಡೆಯುವುದಿಲ್ಲ
ಝಾಕ್ ಪೂನನ್ ರವರು ನಂಬುವುದು:
ಸತ್ಯವೇದವು (ಬೈಬಲಿನ 66 ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.
ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.
ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.
ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.
ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.
ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.
ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.
ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.
ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.
.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ