ಶನಿವಾರ, ಡಿಸೆಂಬರ್ 17, 2011

ಕ್ರಿಸ್ಮಸ್ ಹಬ್ಬದಿಂದ ಜನರಿಗೆ ಸುವಾರ್ತೆ ಮುಟ್ಟಿದೆ----ಅದೇ ಅಲ್ಲವೆ ಬೇಕಾಗಿದ್ದು----ಕೃಪೆಯ ಕಾಲ ಓದುಗರಿಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಶುಭಕಾಮನೆಗಳು .




ಕರ್ನಾಟಕದ C S I ಬಿಷಪ್ ಹಾಗು ಪಾದ್ರಿಗಳಿಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಶುಭಕಾಮನೆಗಳು

ನನ್ನ ತಂದೆ Rev.A.D.ದೊಡ್ಡಮನಿ.C S I. ಸಬೆಗಳಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದವರು. ಅದೇ ಸಂಸ್ಕಾರದಲ್ಲಿ ನಾವು ಬೆಳೆದು ಬಂದವರು. ತಂದೆ ಇದ್ದಾಗ ಕ್ರಿಸ್ಮಸ್ ಹಬ್ಬವನ್ನು ಬಹಳ ಚೆನ್ನಾಗಿ ಆಚರಿಸುತಿದ್ದೇವು ಬಂದುಗಳು ಒಟ್ಟಾಗಿ ಕೂಡಿ ಸಂತಸಪಡುತಿದ್ದೇವು. ಆದ್ರೆ ಆ ಕಾಲಗಳು ಈಗಿಲ್ಲ ಬಹಳ ಬದಲಾವಣೆ ಆಗಿದೆ. ಜೀವನ ಏರೀಳಿತ ಕಂಡಿದೆ. ಹಳೆಯ ನೆನಪುಗಳು ಮನಸಿನಲ್ಲಿ ಹಾದುಹೋಗುತ್ತವೆ ಕಣ್ಣು ಮಾತ್ರ ತೇವ ತೇವ. ಹಳೆಯ ನೆನಪುಗಳೆ ಹಾಗೇ ಅಲ್ಲವೆ...... ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಯೋಸು ಕ್ರಿಸ್ತನ ಹುಟ್ಟುಹಬ್ಬ ಕ್ರಿಸ್ಮಸ್ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲ ಪ್ರಕೃತಿ ನೋಡಿ ಕಣ್ಣು ಅರಳಿಸುವವರಿಗೆ, ಹೊಳೆಯುವ ನಕ್ಷತ್ರ ನೋಡಿ ಆನಂದಿಸುವವರಿಗೆ, ಒಬ್ಬರ ಸಂತಸ ಕಂಡು ಖುಷಿಪಡುವವರಿಗೆ ಕೂಡ ಹಬ್ಬವೆ. ಉಡುಗೊರೆ, ಕೇಕು, ಇಳೆಯ ಮೇಲೆ ಹರಿದಿದೆ ಸಂತಸದ ಹೊಳೆ. ನಾಡಿನಾದ್ಯಂತ ಕ್ರೈಸ್ತ ಬಾಂಧವರ ಮನೆಮನೆಗಳಲ್ಲಿ ಕ್ರಿಸ್ತ ಹುಟ್ಟಿನ ಸಂದರ್ಭವನ್ನು ಮತ್ತೆ ಜ್ಞಾಪಿಸುವ ಗುಡಿಸಲುಗಳ ನಿರ್ಮಾಣ, ಬಣ್ಣದ ಬಣ್ಣದ ಮಿನುಗು ದೀಪಗಳಿಂದ ಅಲಂಕೃತವಾದ ಕ್ರಿಸ್ಮಸ್ ಗಿಡ, ಕೇಕ್ ಪ್ರದರ್ಶನಗಳನ್ನು ನೋಡುವುದೇ ಒಂದು ಆನಂದ. ಕ್ರಿಸ್ಮಸ್ ಹಿಂದಿನ ದಿನ ಮಕ್ಕಳ ಕ್ರಿಸ್ಮಸ್ ನೋಡುವುದೇ ಚಂದ. ಮನೋರಂಜನೆ ಕಾರ್ಯಕ್ರಮಗಳು ನಡುರಾತ್ರಿ ನಡೆಯುವ ಸಮ್ಮಿಲನದಲ್ಲಿ ಮೇಣಬತ್ತಿಗಳು ಬೆಳಗಿಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿವುದೇ ಇನ್ನು ಚಂದ. ಅಂಗಡಿ ಮುಂಗಟ್ಟುಗಳಲ್ಲಿ ಭರ್ತಿ ಮಾರಾಟದ ಭರಾಟೆ. ನಾನಾ ರೀತಿಯ ರಿಯಾಯತಿಗಳ ಪ್ರಯೋಜನ ಪಡೆದು ಉಳ್ಳವರು ತಮಗೆ ಮಾತ್ರವಲ್ಲ ಇಲ್ಲದವರಿಗೂ ಉಡುಗೊರೆಗಳನ್ನು ನೀಡುತ್ತಾರೆ. ಕ್ರಿಸ್ಮಸ್ ಹಬ್ಬದ ಆಶಯವೂ ಇದೇ ಆಗಿದೆ. ಜನರೆಲ್ಲ ಒಟ್ಟಾಗಿ ಕೂಡಿ ಆಚರಿಸುವ ಈ ಹಬ್ಬದಲ್ಲಿ ಪರಿಚಯದ ಜೊತೆಗೆ ಗೆಳೆತನವೂ ಬೆಳೆದಿರುತ್ತದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಆಯೋಜಿಸಲಾಗುವ ಕೇಕ್ ಪ್ರದರ್ಶನದಲ್ಲಿ ಕ್ರೈಸ್ತ ಬಾಂಧವರು ಮಾತ್ರವಲ್ಲ ಉಳಿದ ಮತದವರೂ ಅಷ್ಟೇ ಉತ್ಸಾಹದಿಂದ ಭಾಗವಹಿಸಿರುತ್ತಾರೆ. ಕ್ರಿಸ್ಮಸ್ ಎಂದರೆ ಯೋಸು ಕ್ರಿಸ್ತನ ಸುವಾರ್ತೆಯ ಮಹತ್ವ ಸಾರುವ. ಬಾಂಧವ್ಯವನ್ನು ವೃದ್ಧಿಸುವ,ಸಂತಸವನ್ನು ಹಂಚುವ ಹಬ್ಬ. ಈ ಸಂದರ್ಭದಲ್ಲಿ ಎಲ್ಲ ಕ್ರೈಸ್ತ ಬಾಂಧವರಿಗೆ ಹಾಗು ಕೃಪೆಯ ಕಾಲ ಓದುಗರಿಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಶುಭಕಾಮನೆಗಳು

ಕಾಮೆಂಟ್‌ಗಳಿಲ್ಲ: