ಶನಿವಾರ, ಆಗಸ್ಟ್ 6, 2011

ಬೈಬಲ್ ದೇವರ ವಾಕ್ಯವೆನ್ನುವುದು ನಿಜವೇ?


ಬೈಬಲ್ ದೇವರ ವಾಕ್ಯವೆನ್ನುವುದು ನಿಜವೇ?
ಈ ಪ್ರಶ್ನೆಗೆ ನಮ್ಮ ಉತ್ತರವು ನಾವು ಬೈಬಲ್ಲನ್ನು ಎಂತಹ ದೃಷ್ಟಿಯಿಂದ ನೋಡುತ್ತೇವೆ ಹಾಗೂ ನಮ್ಮ ಜೀವನಕ್ಕೆ ಅದರ ಪ್ರಾಮುಖ್ಯತೆ ಮಾತ್ರವಲ್ಲದೆ, ಶಾಶ್ವತವಾಗಿ ನಮ್ಮ ಮೇಲೆ ಅದರ ಪ್ರಭಾವವೂ ಅಂತಿಮವಾದದ್ದು ಎನ್ನುವುದನ್ನು ಅದು ನಿರ್ಧರಿಸುತ್ತದೆ. ಬೈಬಲ್ ನಿಜವಾಗಿಯೂ ದೇವರ ವಾಕ್ಯವೇ ಆಗಿದ್ದರೆ, ನಾವು ಖಂಡಿತವಾಗಿಯೂ ಅದರಲ್ಲಿ ಹರ್ಷಿಸಬೇಕು, ಅಭ್ಯಾಸ ಮಾಡಬೇಕು, ಓದಬೇಕು, ಧ್ಯಾನಿಸಬೇಕು, ಅದಕ್ಕೆ ವಿಧೇಯರಾಗಬೇಕು ಹಾಗೂ ಸಂಪೂರ್ಣವಾಗಿ ಅದನ್ನು ನಂಬಬೇಕು. ಬೈಬಲ್ ನಿಜವಾಗಿಯೂ ದೇವರ ವಾಕ್ಯವೇ ಆಗಿದ್ದರೆ, ಅದನ್ನು ತಿರಸ್ಕರಿಸುವುದೆಂದರೆ ದೇವರನ್ನು ತಿರಸ್ಕರಿಸಿದಂತೆಯೇ!
ದೇವರು, ಬೈಬಲ್ ಅನ್ನು ನಮಗೆ ಕೊಟ್ಟಿದ್ದಾನೆನ್ನುವುದು ಸತ್ಯವಾಗಿರುವುದರಿಂದ, ಅದು ದೇವರ ಪ್ರೀತಿಯನ್ನು ಸಾಕ್ಷೀಕರಿಸುತ್ತದೆ. “ಪ್ರಕಟಣೆ” ಎನ್ನುವ ಶಬ್ಧವು ದೇವರು ಮನುಷ್ಯರಾದ ನಮ್ಮೊಂದಿಗೆ ದೇವರು ಯಾರು, ಹೇಗಿದ್ದಾನೆನ್ನುವುದನ್ನು ಅದು ತಿಳಿಸುತ್ತದೆ ಹಾಗೂ ಆತನೊಂದಿಗೆ ಸರಿಯಾದ ಸಂಬಂಧವನ್ನು ಹೊಂದುವುದು ಹೇಗೆನ್ನುವುದನ್ನು ತಿಳಿಸುತ್ತದೆ. ಬೈಬಲ್ಲಿನಲ್ಲಿ ದೇವರು, ನಮಗೆ ಅದನ್ನು ದೈವಿಕವಾಗಿ ತಿಳಿಸದೆ ಹೋಗಿದ್ದರೆ ನಮಗೆಂದಿಗೂ ಅದು ತಿಳಿಯುತ್ತಿರಲಿಲ್ಲ. ಆದಾಗ್ಯೂ ಬೈಬಲ್ಲಿನಲ್ಲಿ ದೇವರ ಪ್ರಕಟಣೆಗಳು ೧೫೦೦ ವರುಷಗಳಲ್ಲಿ ಮುಂದುವರೆಯುವ ಭಾಗವಾಗಿ ಕೊಡಲ್ಪಟ್ಟಿವೆ. ದೇವರೊಂದಿಗೆ ಸರಿಯಾದ ಸಂಬಂಧವನ್ನು ಮನುಷ್ಯನು ಹೊಂದಲು ಬೇಕಾಗಿರುವ ಎಲ್ಲ ವಿಷಯಗಳನ್ನೂ ದೇವರು ತನ್ನ ವಾಕ್ಯದಲ್ಲಿ ಕೊಟ್ಟಿದ್ದಾನೆ. ಹಾಗಾದರೆ ಬೈಬಲ್ ಸತ್ಯವಾಗಿಯೂ ದೇವರ ವಾಕ್ಯವಾಗಿದ್ದರೆ, ನಮ್ಮ ಎಲ್ಲ ನಂಬಿಕೆಗಳಿಗೂ ಮತ್ತು ನಡವಳಿಕೆಗಳಿಗೂ, ಧಾರ್ಮಿಕಾಚರಣೆಗಳಿಗೂ ಹಾಗೂ ನೀತಿಗೂ ಅಂತಿಮವಾದ ಅಧಿಪತಿಯಾಗಿದೆ.