ಮಂಗಳವಾರ, ಆಗಸ್ಟ್ 2, 2011

ಬೈಬಲ್ ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಬೈಬಲ್ ಅಥವ ಸತ್ಯವೇದ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಇದರ ಅರ್ಥ, 'ಪುಸ್ತಕಗಳು'ಅಥವಾ 'ಪುಸ್ತಕಗಳ ಸಂಗ್ರಹ'. ಬೈಬಲ್‌ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ""ಹೊಸ ಒಡಂಬಡಿಕೆ".ಇವು ದೈವ ಪ್ರೇರಣೆಯಿಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ವ್ಯಕ್ತಿಗಳಿಂದ ರಚಿಸಲ್ಪಟ್ಟ ಪುಸ್ತಕಗಳ ಸಂಗ್ರಹವೆಂಬುದು ಕ್ರೈಸ್ತರ ನಂಬಿಕೆ. ಇಂದು ಪುಸ್ತಕದ ರೂಪದಲ್ಲಿ ನೋಡುತ್ತಿರುವ ಬೈಬಲ್‌ ಮೂಲರೂಪವಾದ ಹಳೇ ಒಡಂಬಡಿಕೆಯು ಆರಂಭದಲ್ಲಿ 'ದೈವ ವಾಕ್ಯ'ವೆಂಬ ಭಯ, ಭಕ್ತಿಯಿಂದ ಒಂದಕ್ಷರವೂ ಬದಲಾಗದಂತೆ ಜನರ ಬಾಯಿಂದ ಬಾಯಿಗೆ ಪ್ರಸಾರವಾಗುತಿತ್ತು. ಲಿಪಿಗಳು ಬಳಕೆಗೆ ಬರುತಿದ್ದಂತೆ ಅತ್ಯಂತ ಶೃಧ್ಧೆಯಿಂದ ಈ ವಾಕ್ಯಗಳನ್ನು ಕ್ರಮವಾಗಿ ಕಲ್ಲು, ಮೇಣ, ಜೇಡಿ ಮಣ್ಣಿನ ಫಲಕಗಳ ಮೇಲೆ ಬರೆದಿರಿಸತೊಡಗಿದರು. ಅನಂತರ ಪಾಪಿರಸ್ ಎಂಬ ವಸ್ತುವಿನ ಮೇಲೆ ಹಾಗೂ ಕುರಿ, ಮೇಕೆ, ಹಸುವಿನ ಚರ್ಮದ ತೆಳು ಹಾಳೆಗಳ ಮೇಲೆ ಬರೆಯಲು ಉಪಕ್ರಮಿಸಿದರು.
ಸುಮಾರು ೧೫೦೦-೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಹಳೆ ಒಡಂಬಡಿಕೆ ಎಂಬ ಹೆಸರಿನಲ್ಲಿ ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಲಿಪಿಗಳು ಆರಂಭವಾಗುವ ಮೊದಲು 'ದೈವ ವಾಕ್ಯ'ಗಳನ್ನು ಕಲ್ಲು, ಮೇಣ ಮತ್ತು ಜೇಡಿ ಮಣ್ಣಿನ ಫಲಕಗಳ ಮೇಲೆ ಸರಳ ರೂಪದ ಚಿತ್ರಗಳಾಗಿ ಕೆತ್ತುತ್ತಿದ್ದರು. ಇದನ್ನು 'ಕ್ಯುನಿಫಾರ್ಮ್ ಬರವಣಿಗೆ' ಎನ್ನುತ್ತಾರೆ. ಕ್ರಿ.ಪೂ.೧ರ ವೇಳೆಗೆ ಹೀಬ್ರೂ ಭಾಷೆ ಬಳಕೆಗೆ ಬಂದು ಅದು ಈ ಗ್ರಂಥದ ಮೊದಲ ಲಿಪಿಯಾಯಿತು. ಬೈಬಲ್‌ನ ಕೆಲವು ಪ್ರತಿಗಳು ಅರಾಮೈಕ್ ಭಾಷೆಯಲ್ಲೂ ಬರೆದಿರುವುದು ದೊರಕಿದೆ. ಮುಂದೆ ಇವುಗಳನ್ನು ಗ್ರೀಕ್‌ಗೆ ಭಾಷಾಂತರಿಸಲಾಯಿತು. ಈಗ ಜಗತ್ತಿನ ಅನೇಕ ಭಾಷೆಗಳಲ್ಲಿ 'ಬೈಬಲ್' ಲಭ್ಯವಿವೆಯಲ್ಲದೇ, ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Top of Form
Bottom of Form

ಕಾಮೆಂಟ್‌ಗಳಿಲ್ಲ: