ಶುಕ್ರವಾರ, ಮೇ 11, 2012

ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರಿಗೆ ಗೃಹ ಸಾಲದ ಮೇಲಿನ ಬಡ್ಡಿ ಮನ್ನಾ.

ಮಂಗಳೂರು, ಮೇ 11: ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದವರು ಸರಕಾರಿ ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರದ ಕ್ರೈಸ್ತ ಸಮುದಾಯದವರ ಅಭಿವೃದ್ಧಿ ಯೋಜನೆಯಡಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ಈ ಸವಲತ್ತು ಕಲ್ಪಿಸಲಾಗಿದೆ. ಈ ಯೋಜನೆಯಡಿ 2007ರ ನಂತರದ ಬಡ್ಡಿಯನ್ನು ನೇರವಾಗಿ ಆಯಾ ಬ್ಯಾಂಕುಗಳಿಗೆ Karnataka Minorities Development Corporation (KMDC) ಸಂಸ್ಥೆ ನೇರವಾಗಿ ಪಾವತಿಸಲಿದೆ. ಫಲಾನುಭವಿಗಳು ಇದನ್ನು ಮರುಪಾವತಿಸುವ ಅಗತ್ಯವಿರುವುದಿಲ್ಲ ಎಂದು KMDC ಅಧ್ಯಕ್ಷ ಎನ್ ಬಿ ಅಬೂಬಕ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಾರ್ಷಿಕ 1.5 ಲಕ್ಷ ರುಪಾಯಿಗಿಂತ ಕಡಿಮೆ ಆದಾಯವಿರುವ ಕ್ರೈಸ್ತ ಕುಟುಂಬಗಳು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 164 ಫಲಾನುಭವಿಗಳನ್ನು ಗುರುತಿಸಲಾಗಿತ್ತು, 1.23 ಕೋಟಿ ರುಪಾಯಿ ಬಡ್ಡಿ ಮನ್ನಾ ಆಗಲಿದೆ. ಕನಿಷ್ಠ 1 ಲಕ್ಷ ಮತ್ತು ಗರಿಷ್ಠ 5 ಲಕ್ಷ ರುಪಾಯಿ ಗೃಹ ಸಾಲ ಪಡೆದವರಿಗೆ ಇದು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,771 ಮಂದಿ ಕ್ರೈಸ್ತರಿಗೆ ಆರ್ಥಿಕವಾಗಿ ನೆರವಾಗಲು ನಾನಾ ಯೋಜನೆಗಳಡಿ 10.71 ಕೋಟಿ ರು. ನಿಧಿಯಿದೆ.



ಕಾಮೆಂಟ್‌ಗಳಿಲ್ಲ: