'ಅರಬ್ ರಾಷ್ಟ್ರಗಳಲ್ಲಿರುವ ಚರ್ಚ್‌ಗಳನ್ನು ಧ್ವಂಸಗೊಳಿಸಿ'...ಇದು ಸೌದಿ ಅರೇಬಿಯಾದ ಮುಸ್ಲಿಮ್ ಧಾರ್ಮಿಕ ಮುಖಂಡ ಹೊರಡಿಸಿರುವ ಫತ್ವಾ!...ಇದೀಗ ಧಾರ್ಮಿಕ ಮುಖಂಡ ಮಫ್ತಿ ಫತ್ವಾ ವಿರುದ್ಧ ಜರ್ಮನಿ, ಆಸ್ಟ್ರಿಯಾ ಹಾಗೂ ರಷ್ಯಾದ ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲ್ಫ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವಿದೇಶಿಗರ ಮಾನವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಗ್ರಾಂಡ್ ಮುಫ್ತಿ ಶೇಕ್ ಅಬ್ದುಲ್ಲಾಜೀಜ್ ಅಲ್ ಶೇಕ್ ಅವರ ಫತ್ವಾವನ್ನು ಯಾವುದೇ ಕಾರಣಕ್ಕೂ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಜರ್ಮನ್ ಮತ್ತು ಆಸ್ಟ್ರಿಯಾದ ರೋಮನ್ ಕ್ಯಾಥೋಲಿಕ್ ಬಿಷಪ್ಸ್ ತಮ್ಮ ಪ್ರತ್ಯೇಕ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಲ್ಫ್ ಅರಬ್ ದೇಶದಲ್ಲಿ ಸುಮಾರು 35ಲಕ್ಷ ಕ್ರಿಶ್ಚಿಯನ್‌ರು ವಾಸಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಭಾರತ ಮತ್ತು ಫಿಲಿಫೈನ್ಸ್ ದೇಶವರಾಗಿದ್ದಾರೆ. ಆದರೆ ಮುಸ್ಲಿಮೇತರರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ. ಒಂದು ಮನೆಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದು ಕಂಡು ಬಂದಲ್ಲಿ ಅಂತಹವರನ್ನು ಬಂಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈಟ್, ಬಹರೈನ್, ಒಮಾನ್ ಮತ್ತು ಯೆಮೆನ್‌ಗಳಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳಿವೆ. ಆದರೆ ಗ್ರಾಂಡ್ ಮುಫ್ತಿ ಅವರು ಸೌದಿ ರಾಜನ ಕುಮ್ಮಕ್ಕು ಇಲ್ಲದೆಯೇ ಈ ಫತ್ವಾವನ್ನು ಹೊರಡಿಸಲು ಸಾಧ್ಯವೇ ಎಂಬುದಾಗಿ ಕ್ರಿಶ್ಚಿಯನ್ ಬಿಷಪ್ಸ್ ಪ್ರಶ್ನಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ