ಬುಧವಾರ, ಅಕ್ಟೋಬರ್ 5, 2011
ಕುಟುಂಬ ಯೋಜನೆಗೆ ಚರ್ಚ್ ಸೆಡ್ಡು (ಹುಟ್ಟಿಸಿದವ ಹುಲ್ಲು ಮೇಯಿಸದೆ ಇರಲಾರ)
: 5ನೇ ಮಗುವಿಗೆ 10 ಸಾವಿರ ರೂ.!
ಹೊಸದಾಗಿ ರೂಪಿಸಲಾಗುತ್ತಿರುವ, ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ಸಮಿತಿಯು ರೂಪಿಸಿದ ಮಹಿಳಾ ನೀತಿ ಸಂಹಿತೆ ಕರಡು ಮಸೂದೆಯಲ್ಲಿ, ಮೂರನೇ ಮಗು ಉಳ್ಳವರಿಗೆ 10 ಸಾವಿರ ರೂಪಾಯಿ ದಂಡ ಮತ್ತು 3 ತಿಂಗಳ ಶಿಕ್ಷೆ ವಿಧಿಸುವ ಶಿಫಾರಸು ಇದೆ. ಇದರ ಬಗ್ಗೆ ಈಗಾಗಲೇ ಕೋಲಾಹಲವೆದ್ದಿದ್ದರೆ, ಇದಕ್ಕೆ ಪ್ರತಿಯಾಗಿ ಅಲ್ಲಿನ ಚರ್ಚು, ಐದನೇ ಮಕ್ಕಳು ಉಳ್ಳವರಿಗೆ 10 ಸಾವಿರ ರೂಪಾಯಿ ಇನಾಮು ಘೋಷಿಸಿದೆ!
ಐದನೇ ಮಗು ಹೊಂದಲು ಬಯಸುವ ದಂಪತಿಗಳ ಹೆಸರಿನಲ್ಲಿ 10 ಸಾವಿರ ರೂಪಾಯಿಗಳ ನಿರಖು ಠೇವಣಿ (ಫಿಕ್ಸೆಡ್ ಡಿಪಾಸಿಟ್) ಇರಿಸುವುದಾಗಿ ಕೇರಳದ ವಯನಾಡಿನ ಕಲ್ಪೆಟ್ಟಾ ಮೂಲಕ ಸೈಂಟ್ ವಿನ್ಸೆಂಟ್ ಡಿ ಪೌಲ್ ಫೋರೇನ್ ಪ್ಯಾರಿಶ್ ಚರ್ಚು ಘೋಷಿಸಿದೆ.
ಹಲವು ಮಕ್ಕಳನ್ನು ಹೊಂದಿರುವುದು ನಾಚಿಕೆಯ ಸಂಗತಿ ಎಂದು ಪ್ಯಾರಿಶ್ ಸಮುದಾಯದವರು ಭಾವಿಸಬೇಕಿಲ್ಲ. ವೃದ್ಧಾಪ್ಯದಲ್ಲಿ ನೆರವು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ನಾಲ್ಕನೇ, ಐದನೇ ಮಕ್ಕಳನ್ನೂ ಹೊಂದಬಹುದೆಂದು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಾಲ್ಕನೇ ಮಕ್ಕಳನ್ನು ಹೊಂದುವವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಲಾಗುತ್ತದೆ. ಐದನೇ ಮಕ್ಕಳನ್ನು ಹೊಂದುವವರಿಗೆ ಹತ್ತು ಸಾವಿರ ರೂಪಾಯಿ ಠೇವಣಿ ಇರಿಸಿ, ಮಗುವು ಬೆಳೆದು 18 ವರ್ಷವಾದ ನಂತರ ಅದನ್ನು ಬಡ್ಡಿ ಸಹಿತವಾಗಿ ಹಿಂಪಡೆಯುವ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಅಂದರೆ ಈ 10 ಸಾವಿರ ರೂಪಾಯಿಯು, 18 ವರ್ಷದ ಬಳಿಕ ಬಡ್ಡಿ ಸೇರಿ ಸುಮಾರು 55 ಸಾವಿರ ರೂಪಾಯಿಯಷ್ಟಾಗಬಹುದು.
ಈ ಯೋಜನೆಯ ಸಂಚಾಲಕರು ಕೇರಳ ಕೆಥೋಲಿಕ್ ಬಿಷಪ್ಸ್ ಮಂಡಳಿ (ಕೆಸಿಬಿಸಿ)ಗೆ ಸೇರಿದ ಪ್ರೊ-ಲೈಫ್ ಸಮಿತಿಯ ಮಲಬಾರ್ ಪ್ರದೇಶದ ಸಂಚಾಲಕರಾಗಿರುವ ಸಾಲು ಅಬ್ರಹಾಂ ಮಚೇರಿಲ್ ಅವರು. ಅವರು ಹೇಳುವ ಪ್ರಕಾರ, ಹೆಚ್ಚು ಮಕ್ಕಳನ್ನು ಹೊಂದುವಂತೆ ನಾವೇನೂ ಪ್ರೋತ್ಸಾಹ ನೀಡುತ್ತಿಲ್ಲ, ಆದರೆ ಅವರಿಗೂ ಮಾನ್ಯತೆ ದೊರೆಯಬೇಕೆಂಬುದು ನಮ್ಮ ಉದ್ದೇಶ ಎಂದಿದ್ದಾರೆ.
"ನಮ್ಮ ಸಮುದಾಯದವರು ಸಾಕಷ್ಟು ಮಂದಿ ಇದ್ದಾರೆ. ಜನಸಂಖ್ಯೆಯ ಅಧ್ಯಯನ ನಡೆಸಿದರೆ, ಕುಟುಂಬ ಯೋಜನೆಯನ್ನು ಪಾಲಿಸಿದ ನಾಯರ್ ಮತ್ತು ನಂಬೂದಿರಿ ಸಮುದಾಯದ ಕುಟುಂಬಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ನಾವು ನೋಡಬಹುದು. ನಮ್ಮ ಸಮುದಾಯವೂ ಆ ರೀತಿ ಆಗಬಾರದು" ಎಂದು ವಿವರಿಸಿದ್ದಾರೆ ಅವರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ