ಬುಧವಾರ, ಅಕ್ಟೋಬರ್ 26, 2011

(ನಿಜ ಕ್ರೈಸ್ತರಲ್ಲ ) ಈತನ ವಯಸ್ಸು 67, 39 ಪತ್ನಿಯರು, 120 ಮಕ್ಕಳು




ಐಜೋವಾಲ್: 39 ಪತ್ನಿಯರು, 120 ಮಕ್ಕಳು ಹಾಗೂ ಮೊಮ್ಮಕ್ಕಳು ಎಲ್ಲವೂ ಅಫೀಶಿಯಲ್ ಹಾಗೂ ಎಲ್ಲರೂ ಸುಖವಾಗಿ ಒಂದೇ ಕಡೆ ಇದ್ದಾರೆ. ಜಿಯೊಘಾಕ ಛಾನ ಎಂಬ ಕ್ರೈಸ್ತ ಬುಡಕಟ್ಟಿನ ನಾಯಕನ ಸಂಸಾರ ಬಹುಶಃ ಜಗತ್ತಿನ ಅತಿದೊಡ್ಡ ಕ್ರೈಸ್ತ ಕುಟುಂಬ ಎನ್ನಬಹುದು.
ಆದರೆ, ಕ್ರೈಸ್ತ ಸಮುದಾಯದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಯಲ್ಲಿಲ್ಲ. ಬಕ್ತವಾಂಗ್ ಕುಗ್ರಾಮದಲ್ಲಿ ಸಮುದಾಯ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲರೂ ಜೀವಿಸುತ್ತಿದ್ದಾರೆ. 181 ಸದಸ್ಯರಿದ್ದಾರೆ. 39 ಪತ್ನಿಯರು, 94 ಮಕ್ಕಳು, 14 ಸೊಸೆಯಂದಿರು ಹಾಗೂ 33 ಮೊಮ್ಮಕ್ಕಳಿದ್ದಾರೆ.
ಪತ್ನಿಯರಿಗೆ ಈ ಸಿಸ್ಟಮ್ : ಛನ್ನಾ ಎಂಬ ಕೈಸ್ತ ಪಂಗಡ ಬಾಕಿ ಕ್ರೈಸ್ತರ ಜೊತೆ ಬೆರೆಯದೇ ತಮ್ಮದೇ ಚರ್ಚ್ ನಿರ್ಮಿಸಿಕೊಂಡು ದೇವರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜಿಯೊಘಾಕ ಛಾನ ತನ್ನ ಪತ್ನಿಯರಿಗೆ rotation ಮೂಲಕ ತನ್ನ ಜೊತೆ ಮಲಗುವ ವ್ಯವಸ್ಥೆ ಕಲ್ಪಿಸಿದ್ದಾನೆ.
ಈ ಪಂಗಡ ಹುಟ್ಟು ಹಾಕಿದ ಛಲ್ಲಿಯಾನ್ಚಲ್ಲ ಎಂಬ ಪಾದ್ರಿಗೂ ಕೂಡಾ 50 ಜನ ಪತ್ನಿಯರಿದ್ದರಂತೆ.
ಭಾರತ ಮೂರನೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ಮಿಜೋರಂ ನಲ್ಲಿ ಶೇ.88ರಷ್ಟು ಮಂದಿ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದಾರೆ. 1894ರಲ್ಲಿ ಬ್ರಿಟಿಷ್ ಮಿಷನರೀಸ್ ನ ವಿಲಿಯಂ ಫ್ರೆಡೆರಿಕ್ ಇಲ್ಲಿ ಮೊಟ್ಟಮೊದಲಿಗೆ ಕ್ರೈಸ್ತ ಬೀಜ ಬಿತ್ತಿದ್ದ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ: